ಧನ್ವಂತರಿ
ನಿಮ್ಮ ಆರೋಗ್ಯದ ಬಗ್ಗೆ ನಿಮಗೇನು ಗೊತ್ತು?
ಹಾಗಿದ್ದರೆ ಈ ಪುಸ್ತಕವನ್ನು ನೀವು ಓದಲೇಬೇಕು ಸುರಲೋಕದ ಸುಪ್ರಸಿದ್ಧ ವೈದ್ಯನೊಬ್ಬನ ಹೆಸರು 'ಧನ್ವಂತರಿ'' ಎಂದು. ವೈದ್ಯಶಾಸ್ತ್ರದ ಕೊನೆ ಮುಟ್ಟಿದವನು ಎಂಬ ಅರ್ಥವನ್ನು ಧ್ವನಿಸುವ ಶಬ್ದ 'ಧನ್ವಂತರಿ'. ಈ ಕಾರಣದಿಂದಾಗಿಯೇ ನರಲೋಕದ ಸುಪ್ರಸಿದ್ಧ ವೈದ್ಯರಲ್ಲೊಬ್ಬರಾದ; ಆಯುರ್ವೇದ ವಿದ್ವಾಂಸರೂ, ಹಲವಾರು ಉಪಯುಕ್ತ ಸಾಹಿತ್ಯಕೃತಿಗಳ ಕರ್ತೃವೂ, ಪತ್ರಕರ್ತರೂ, ಜ್ಞಾನವೃದ್ಧರೂ, ವಯೋವೃದ್ಧರೂ ಆಗಿದ್ದ ಡಾ|| ಮಳಿಯ ಗೋಪಾಲಕೃಷ್ಣರಾಯರ ಅಸಾಧಾರಣ ಪ್ರತಿಭೆ ಮತ್ತು ಅನ್ಯಾದೃಶ್ಯವಾದ ತ್ಯಾಗಮಯ ಹಾಗೂ ಅಪರೂಪದ ಸರಳಜೀವನವನ್ನು ಚಿತ್ರಿಸುವ ಈ ಕಿರುಹೊತ್ತಿಗೆಗೂ ಕೂಡ 'ಧನ್ವಂತರಿ' ಎಂಬ ಹೆಸರನ್ನೇ ಸೂಚಿಸಲಾಗಿದೆ. ಇದು ಕೇವಲ ವ್ಯಕ್ತಿಯೊಬ್ಬರ ಜೀವನದ ಆಗುಹೋಗುಗಳ ನಿರೂಪಣೆ ಮಾತ್ರವಲ್ಲ; ನಿಮ್ಮ ತನು-ಮನಗಳ ವಿಕೃತಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನೂ ನೀವಿಲ್ಲಿ ಪಡೆಯಬಹುದು. ರೋಗವೆಂದರೇನು? ಔಷಧವೆಂದರೇನು? ಕಿವಿ ಕೇಳಿಸದಿರಲು ಕಾರಣವೇನು? ಹುಳುಕು ಹಲ್ಲನ್ನು ಕೀಳಿಸಲೇಬೇಕೆ? ಗರ್ಭಿಣಿ ಹೆಂಗಸರು ವಾಂತಿ ಮಾಡಿಕೊಳ್ಳಲು ಕಾರಣವೇನು? ಪ್ರತಿಯೊಬ್ಬರಿಗೂ ಲೈಂಗಿಕ ಶಿಕ್ಷಣದ ಅಗತ್ಯ ಉಂಟೆ? ಜನಸಾಮಾನ್ಯರ ಆರೋಗ್ಯರಕ್ಷಣೆಗೆ ದುಬಾರಿ ವೈದ್ಯರು ಅಗತ್ಯವೇ? ಯಾವುದೇ ರೋಗದ ಪೀಡೆಯು ಪರಿಹಾರವಾಗುವುದು ಹೇಗೆ? ಸ್ವಾಸ್ಥ್ಯ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಪಾತ್ರವೇನು? ಮುಂತಾದ ಹಲವಾರು ಸಮಸ್ಯೆಗಳಿಗೆ ದೊರೆಯುವ ಸಮಂಜಸವಾದ ಸಮಾಧಾನಗಳು ಈ ಕೃತಿಯಲ್ಲಿ ಕಾಣಬರುವ ಮಹತ್ವದ ಸಂಗತಿಗಳಾಗಿವೆ.
ಸುಧಾರ್ಥಿ ಹಾಸನ
Return Policy
No returns or replacement